ಫೆಬ್ರವರಿ 5 ಯಾವಾಗ ಬರುತ್ತೆ ಅಂತ ಕಾಯ್ತಾ ಇದ್ರು ಕನ್ನಡ ಸಿನಿಪ್ರೇಕ್ಷಕರು. ಯಾಕಂದ್ರೆ, ಸಂಜೆ 5 ಗಂಟೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಸಿನಿಮಾ ಟೈಟಲ್ ಹಾಡು ರಿಲೀಸ್ ಆಗ್ತಿತ್ತು. ಅದರಂತೆ 'ನಿಂತ ನೋಡೋ ಯಜಮಾನ' ಹಾಡು ಬಂದಿದ್ದು, ಬಿಡುಗಡೆಯಾದ 6 ನಿಮಿಷದಲ್ಲಿ ಈ ಹಿಂದಿನ ದಾಖಲೆಗಳನ್ನೆಲ್ಲಾ ಉಡೀಸ್ ಮಾಡಿದೆ. ಸಂತೋಷ್ ಆನಂದ್ ರಾಮ್ ಸಾಹಿತ್ಯ, ವಿಜಯ್ ಪ್ರಕಾಶ್ ಗಾಯನ, ಹರಿಕೃಷ್ಣ ಅವರ ಸಂಗೀತ ಸೇರಿ ಇನ್ನೊಂದು ಸೂಪರ್ ಹಿಟ್ ಹಾಡಿಗೆ ಕಾರಣವಾಗಿದ್ದಾರೆ.<br /><br />Challenging star darshan starrer yajamana movie title track released yesterday. music by v harikrishna.